ವಿಶೇಷ ಲೇಖನ
|
ಕನ್ನಡ ಅಕ್ಷರಮಾಲೆ 'ಅ'
ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.
|
ನಮ್ಮ ಹೊಸ ಲೇಖನಗಳಿಂದ...
|
|
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಕೆಲವು ಸ್ವಾರಸ್ಯಕರ ಸಂಗತಿಗಳು:
- ಶಶಿಕುಮಾರ್ (ನಟ) (ಜನನ ೨ ಡಿಸೆಂಬರ್ ೧೯೬೫) ಕನ್ನಡ ಚಲನಚಿತ್ರ ನಟ ಮತ್ತು ರಾಜಕಾರಣಿ. ತಮ್ಮ ಚಲನಚಿತ್ರ ಬದುಕಿನ ಉಚ್ಛ್ರಾಯ ಕಾಲದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಸುಂದರವಾದ ನಟರಲ್ಲಿ ಒಬ್ಬರನ್ನಾಗಿ ಶಶಿಕುಮಾರ್ ಅವರನ್ನು ಪರಿಗಣಿಸಲಾಗುತ್ತದೆ(ಚಿತ್ರಿತ).
- ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ.
- ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.
- ಕೊವ್ಯಾಕ್ಸಿನ್ (ಅಧೀಕೃತ ಹೆಸರು ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆಯು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
- ಸಿಗಡಿ ಕೃಷಿ ಯು ಮನುಷ್ಯನ ಅಹಾರಕ್ಕಾಗಿ, ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ.
|
|
ಸುದ್ದಿಯಲ್ಲಿ
|
ಟಿ೨೦ ವಿಶ್ವಕಪ್ ಲೋಗೋ
- ನವೆಂಬರ್ ೧೩: ೨೦೨೨ ರ ಐಸಿಸಿ ಪುರುಷರ ಟಿ೨೦ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲುವು.
- ನವೆಂಬರ್ ೧೧: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ೧೦೮ ಅಡಿಯ ಕಂಚಿನ ಕೆಂಪೇಗೌಡರ ಪ್ರತಿಮೆ ಅನಾವರಣ.
- ನವೆಂಬರ್ ೦೧ : ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ.
- ಅಕ್ಟೋಬರ್ ೩೦ : ಗುಜರಾತ್ನ ಮೊರ್ಬಿಯಲ್ಲಿ ಫುಟ್ಬ್ರಿಡ್ಜ್ ಕುಸಿತ ,141 .
- ಅಕ್ಟೋಬರ್ ೨೪ : ಲಿಜ್ ಟ್ರಸ್ ರಾಜೀನಾಮೆಯಿಂದ ತೆರವಾಗಿದ್ದ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ರಿಷಿ ಸುನಕ್ ಆಯ್ಕೆ
|
ಈ ತಿಂಗಳ ಪ್ರಮುಖ ದಿನಗಳು
|
ನವೆಂಬರ್:
ಶ್ರೀ ಕನಕ ದಾಸರು
|
|