ವಿಶೇಷ ಲೇಖನ
|
ಕನ್ನಡ ಅಕ್ಷರಮಾಲೆ 'ಅ'
ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.
|
ನಮ್ಮ ಹೊಸ ಲೇಖನಗಳಿಂದ...
|
|
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
- ಶಶಿಕುಮಾರ್ (ನಟ) (ಜನನ ೨ ಡಿಸೆಂಬರ್ ೧೯೬೫) ಕನ್ನಡ ಚಲನಚಿತ್ರ ನಟ ಮತ್ತು ರಾಜಕಾರಣಿ. ತಮ್ಮ ಚಲನಚಿತ್ರ ಬದುಕಿನ ಉಚ್ಛ್ರಾಯ ಕಾಲದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಸುಂದರವಾದ ನಟರಲ್ಲಿ ಒಬ್ಬರನ್ನಾಗಿ ಶಶಿಕುಮಾರ್ ಅವರನ್ನು ಪರಿಗಣಿಸಲಾಗುತ್ತದೆ(ಚಿತ್ರಿತ).
- ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ.
- ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.
- ಕೊವ್ಯಾಕ್ಸಿನ್ (ಅಧೀಕೃತ ಹೆಸರು ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆಯು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
- ಸಿಗಡಿ ಕೃಷಿ ಯು ಮನುಷ್ಯನ ಅಹಾರಕ್ಕಾಗಿ, ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ.
|
|
ಸುದ್ದಿಯಲ್ಲಿ
|
ದಸರಾ ಜಂಬೂ ಸವಾರಿ
- ಅಕ್ಟೋಬರ್ ೧: ಭಾರತದಲ್ಲಿ ೫ಜಿ ಮೊಬೈಲ್ ಸೇವೆಗೆ ಪ್ರಧಾನಿ ನರೇಂದ್ರ_ಮೋದಿ ಚಾಲನೆ [೧]
- ಸೆಪ್ಟೆಂಬರ್ ೨೭: ಪರೀಕ್ಷಾರ್ಥ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶ ನೌಕೆ 'ಡಾರ್ಟ್' ಅನ್ನು ಕ್ಷುದ್ರಗ್ರಹ 'ಡಿಮೊರ್ಫಸ್'ಗೆ ಢಿಕ್ಕಿ ಹೊಡೆಸಿದ ನಾಸಾ.[೨]
- ಸೆಪ್ಟೆಂಬರ್ ೧೮: ಗುರು_(ಗ್ರಹ) ಸೆಪ್ಟೆಂಬರ್ ೨೬ ರಂದು ಭೂಮಿಗೆ ಬಹು ಹತ್ತಿರದಲ್ಲಿ ಬರಲಿದೆ (೩೬.೫ ಕೋಟಿ ಮೈಲು). [೪]
- ಸೆಪ್ಟೆಂಬರ್ ೧೮: ಹಬಲ್_ದೂರದರ್ಶಕದಿಂದ ೧೮ ಕೋಟಿ ಜ್ಯೋತಿರ್ವರ್ಷ ದೂರದ ಎನ್ ಜಿ ಸಿ ೧೯೬೧ ನಿಹಾರಿಕೆಯ ಛಾಯಾಚಿತ್ರ ಸೆರೆ. [೫]
|
ಈ ತಿಂಗಳ ಪ್ರಮುಖ ದಿನಗಳು
|
ಶ್ರೀ ಕೋಟ ಶಿವರಾಮ ಕಾರಂತ
ಹುಯಿಲಗೋಳ ನಾರಾಯಣರಾಯರು
- ಅಕ್ಟೋಬರ್ ೧: ವಿಶ್ವ ವೃದ್ಧರ ದಿನ, ವನ್ಯಜೀವಿ ಸಪ್ತಾಹ ದಿನ, ವಿಶ್ವ ಸಂಗೀತ ದಿನ, ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತ ದಾನ ದಿನ
- ಅಕ್ಟೋಬರ್ ೨ : ವಿಶ್ವ ಸಸ್ಯಾಹಾರಿಗಳ ದಿನ, ಗಾಂಧೀಜಿಯವರ ಜನ್ಮದಿನಾಚರಣೆ.
- ಅಕ್ಟೋಬರ್ ೨ : ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ.
- ಅಕ್ಟೋಬರ್ ೩ : ೧೯೯೦ರಲ್ಲಿ ಜರ್ಮನಿ ದೇಶದ ಪುನರೇಕೀಕರಣ. ವಿಶ್ವ ಪ್ರಾಕೃತಿಕ ದಿನ
- ಅಕ್ಟೋಬರ್ ೪ : ೧೮೮೪ರಲ್ಲಿ ಗದಗದಲ್ಲಿ ಹುಯಿಲಗೋಳ ನಾರಾಯಣರಾಯರ ಜನನ, ೧೯೫೭ರಲ್ಲಿ ಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೧ ಭೂಮಿಯನ್ನು ಪ್ರದಕ್ಷಣೆ ಮಾಡಿದ ಮೊದಲ ಕೃತಕ ಉಪಗ್ರಹವಾಯಿತು, ವಿಶ್ವ ಪ್ರಾಣಿದಯಾ/ಪ್ರಾಣಿ ಕ್ಷೇಮಾಭಿವೃದ್ಧಿ ದಿನ
- ಅಕ್ಟೋಬರ್ ೫ : ವಿಶ್ವ ಹವ್ಯಾಸ ದಿನ
- ಅಕ್ಟೋಬರ್ ೬ : ೧೯೭೩ರಲ್ಲಿ ಈಜಿಪ್ಟ್ನ ಸೇನೆ ಇಸ್ರೇಲ್ ದೇಶವನ್ನು ಪ್ರವೇಶಿಸಿ ಯೊಮ್ ಕಿಪ್ಪೂರ್ ಯುದ್ಧ ಪ್ರಾರಂಭವಾಯಿತು.
- ಅಕ್ಟೋಬರ್ ೮ : ವಾಯುಪಡೆ ದಿನ
- ಅಕ್ಟೋಬರ್ ೯ : ವಿಶ್ವ ಅಂಚೆ ದಿನ
- ಅಕ್ಟೋಬರ್ ೧೦: ೧೯೦೨ರಲ್ಲಿ ಶಿವರಾಮ ಕಾರಂತರ ಜನನ. (ಚಿತ್ರಿತ), ವಿಶ್ವ ಮರಣದಂಡನೆ ವಿರೋಧಿ ದಿನ
- ಅಕ್ಟೋಬರ್ ೧೨ : ೧೪೯೨ರಲ್ಲಿ ಕ್ರಿಸ್ಟೊಫರ್ ಕೊಲಂಬಸ್ ಕೆರಿಬಿಯನ್ ಪ್ರದೇಶದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು.
- ಅಕ್ಟೋಬರ್ ೧೪ : ವಿಶ್ವ ಗುಣಮಟ್ಟ ದಿನ
- ಅಕ್ಟೋಬರ್ ೧೬ : ವಿಶ್ವ ಆಹಾರ ದಿನ
- ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ)ಯ ಸ್ಥಾಪನೆ.
- ಅಕ್ಟೋಬರ್ ೧೯ : ನೊಬೆಲ್ ಪ್ರಶಸ್ತಿ ವಿಜೇತ ಡಾ. ಸುಬ್ರಮಣ್ಯಂ ಚಂದ್ರಶೇಖರ್ (1910-1995) ಅವರ ಜನ್ಮದಿನ.
- ಅಕ್ಟೋಬರ್ ೨೧ : ಪೋಲೀಸ್ ಹುತಾತ್ಮರ ದಿನ [ಅಕ್ಟೋಬರ್ ೨೩]ಕಿತ್ತೂರು ರಾಣಿ ಚೆನ್ನಮ್ಮ ಜನ್ಮ ದಿನ.
- ಅಕ್ಟೋಬರ್ ೨೪ : ೧೯೪೫ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ(ವಿಶ್ವಸಂಸ್ಥೆ)ಯ ಸ್ಥಾಪನೆ.
- ಅಕ್ಟೋಬರ್ ೨೪ : ನರಕ ಚತುರ್ದಶಿ
- ಅಕ್ಟೋಬರ್ ೨೫ : ದೀಪಾವಳಿ ಅಮಾವಾಸ್ಯೆ, ಲಕ್ಷ್ಮೀಪೂಜೆ
- ಅಕ್ಟೋಬರ್ ೨೬ : ಬಲಿಪಾಡ್ಯಮಿ
- ಅಕ್ಟೋಬರ್ ೨೯ : ೧೯೩೬ರಲ್ಲಿ ಶಿವಮೊಗ್ಗದಲ್ಲಿ ಗೀತಕಾವ್ಯಗಳ ಜನಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಜನನ, ಟರ್ಕಿ ಗಣರಾಜ್ಯವಾಗಿ ೧೯೨೩ರಲ್ಲಿ ಮುಸ್ತಫ ಕೆಮಲ್ ಅಟಾತುರ್ಕ್ ಅದರ ಮೊದಲ ರಾಷ್ಟ್ರಪತಿಯಾದನು.
- ಅಕ್ಟೋಬರ್ ೩೦ : ವಿಶ್ವ ಉಳಿತಾಯ / ಮಿತವ್ಯಯ ದಿನ
- ಅಕ್ಟೋಬರ್ ೩೧ : ೧೮೭೫ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ, ೧೯೮೪ರಲ್ಲಿ ಇಂದಿರಾ ಗಾಂಧಿಯ ಹತ್ಯೆ.
|
|